ಭಾನುವಾರ, ಆಗಸ್ಟ್ 18, 2013

ಮರೆಯಾದ ಮಾನವ ಕಂಪ್ಯೂಟರ್ ಶಕುಂತಲಾದೇವಿ


ಮಾನವ ಕಂಪ್ಯೂಟರ್ ಎಂದೇ ಲೋಕವಿಖ್ಯಾತ ರಾಗಿದ್ದ ಶಕುಂತಲಾ ದೇವಿ ಇನ್ನಿಲ್ಲ. ಅದರೆ ಅವರ ದೈತ್ಯಪ್ರತಿಭೆ ಮತ್ತು ಎಂಥಹ ಕ್ಲಿಷ್ಠ ಸಮಸ್ಯೆಯನ್ನು ಎದುರಿಸುವ ಸಾಮಥ್ರ್ಯ ವನ್ನು ಮತ್ತೊಬ್ಬರಲ್ಲಿ ನಿರೀಕ್ಷಿಸಲೂ ಸಾಧ್ಯವಿಲ್ಲ. ಅದೊಂದು ಅನನ್ಯ ಪ್ರತಿಭೆ, ಅದರಲ್ಲೂ ನಮ್ಮ ರಾಜ್ಯದ ಕನ್ನಡಿಗರು ಶಕುಂತಲಾ ದೇವಿ ಎಂಬುದು ಹೆವ್ಮ್ಮೆಯ ಸಂಗತಿ. ಇತ್ತೀಚಿನ ತಲೆಮಾರಿನಲ್ಲಿ ಬಹುತೇಕರಿಗೆ ಮಾನವ ಕಂಪ್ಯೂಟರ್ ಶಕುಂತಲಾ ದೇವಿಯವರ ಕುರಿತು ತಿಳಿದಿರಲಾರದು. ಕಳೆದ ಒಂದು ದಶಕಗಳ ಹಿಂದಿನ ವರೆಗೂ ಖ್ಯಾತಿಯ ಉತ್ತುಂಗದಲ್ಲಿದ್ದ ಶಕುಂತಲಾದೇವಿ ವಿಶ್ವ ಪರ್ಯಟನೆಯ ನಂತರ ಇಳಿ ವಯಸ್ಸಿಗೆ ಬೆಂಗಳೂರಿನಲ್ಲೇ ನೆಲೆಸಿದ್ದರು. ಹಾಗೂ ಜ್ಯೋತಿಷ್ಯ ಹೇಳುತ್ತಾ ದಿನ ದೂಡುತ್ತಿದ್ದರು. ಜನ್ಮ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಯನ್ನಾದರಿಸಿ ಲೆಕ್ಕ ಹಾಕಿ ಜ್ಯೋತಿಷ್ಯ ಹೇಳುವುದರಲ್ಲಿ ಶಕುಂತಲಾ ದೇವಿ ಸಿದ್ದಹಸ್ತರಾಗಿದ್ದರು.
ಇದೆಲ್ಲಕ್ಕಿಂತ ಶಕುಂತಲಾ ದೇವಿ ಬಾಲ್ಯದಲ್ಲೇ ತೋರಿದ ಅಸಾಧಾರಣ ಪ್ರತಿಭೆ ಅವರನ್ನು ಜಗತ್ತಿಗೆ ಬಹುಬೇಗ ಪರಿಚಯವಾಗುವಂತೆ ಮಾಡಿದ ಕಥಾನಕ ಮಾತ್ರ ಸಿನಿಮಾ ಕಥೆಗಿಂತಲೂ ರೋಚಕವಾದ್ದೇ ಆಗಿದೆ.ಬ್ರಾಹ್ಮಣ ಕುಟುಂಬದ ಶಕುಂತಲಾ ದೇವಿ ಜನಿಸಿದ್ದು 4, ನವೆಂಬರ್ 1929 ರಂದು ಬೆಂಗಳೂರಿನಲ್ಲಿ. ತಂದೆ ಮತ್ತು ತಾಯಿಯ ಕುರಿತು ಖಚಿತವಾದ ಮಾಹಿತಿಗಳು ಲಭ್ಯವಿಲ್ಲ ಆದರೆ ಶಕುಂತಲ ದೇವಿ 3ವರ್ಷದ ಮಗುವಾಗಿದ್ದಾಗಲೇ ಅವರ ತಂದೆ ಪುರೋಹಿತ ವರ್ಗದ ಅರ್ಚಕ ವ್ಲತ್ತಿಯನ್ನು ಮಾಡಲು ಒಪ್ಪದೇ ಹೊಟ್ಟೆಪಾಡಿಗಾಗಿ ಸರ್ಕಸ್ ಸೇರಿಬಿಟ್ಟಿದ್ದರು. ಆ ವೇಳೆಗೆ ಶಕುಂತಲಾ ದೇವಿಯವರ ತಾಯಿಯೂ ಇದ್ದರೆ ಎಂಬುದು ತಿಳಿದಿಲ್ಲ. ಶಕುಂತಲಾ ದೇವಿಯ ತಂದೆ ಸರ್ಕಸ್ ನಲ್ಲಿ ಹಗ್ಗದ ಮೇಲೆ ಕೋಲನ್ನು ಹಿಡಿದು ಬ್ಯಾಲೆನ್ಸ್ ಮಾಡುತ್ತಾ ನಡೆಯುವ ಆಟ ಪ್ರದರ್ಶಿಸುತ್ತಿದ್ದರು. ಇದೆ ಸಂಧರ್ಭದಲ್ಲಿ ಕಾರ್ಡ ಟ್ರಿಕ್ ಮಾಡುತ್ತಿದ್ದ ತಂದೆಗೆ ಸಹಾಯಕಿಯಾಗಿ 3ವರ್ಷದ ಶಕುಂತಲಾ ಸಹಕರಿಸುತ್ತಿತ್ತು.ಒಂದು ದಿನ ತಂದೆಯೊಂದಿಗೆ ಸರ್ಕಸ್ ನಿಂದ ಹೊರಬಿದ್ದ ಬಾಲೆ ಶಕುಂತಲಾ ರಸ್ತೆ ಬದಿಯ ಪ್ರದರ್ಶನಗಳಲ್ಲು ತನ್ನ ಅಗಾಧ ಬುದ್ದಿ ಮತ್ತೆ ಪ್ರದರ್ಶಿಸಿ ಪ್ರೇಕ್ಷಕÀ ವರ್ಗದ ಗಮನ ಸೆಳೆಯುತ್ತಿದ್ದಳು. ಸರಿ ಸುಮಾರು 6ನೇ ವಯಸ್ಸಿಗೆ ಬುದ್ದಿ ಮತ್ತೆ ಪ್ರದರ್ಶನ, ನೆನಪಿನ ಶಕ್ತಿ ಪ್ರದರ್ಶನ ಹಾಗೂ ಕಠಿಣ ಲೆಕ್ಕಾಚಾರಗಳನ್ನು ಚಾಕಚಕ್ಯತೆಯಿಂದ ಕ್ಷಣ ಮಾತ್ರದಲ್ಲಿ ಪರಿಹರಿಸಿ ಉತ್ತರಿಸುತ್ತಿದ್ದ ಇದೆಲ್ಲವನ್ನು ಜ್ಞಾನ ಗಂಗೋತ್ರಿಯಂತಿದ್ದ ಮೈಸೂರು ವಿವಿ ಮುಂದೆ ಪ್ರದರ್ಶಿಸಿ ಗಮನ ಸೆಳೆದರು. ಮುಂದೆ 8ನೇ ವಯಸ್ಸಿನಲ್ಲಿ ಚೆನ್ನೈಗೆ ಹೋದ ಶಕುಂತಲಾ ದೇವಿ ಅಲ್ಲಿಯ ಪ್ರಸಿದ್ದ ಅಣ್ಣಾ ಮಲೈ ವಿವಿ ಯ ಎದುರು ಇಂತಹದ್ದೇ ಪ್ರದರ್ಶನ ನೀಡಿ ಸೈಎನಿಸಿಕೊಂಡರಲಲ್ಲದೇ ಪ್ರವರ್ದಮಾನಕ್ಕೆ ಬಂದರು.
ಹೀಗೆ ಶಾಲೆಯನ್ನೇ ಕಲಿಯದೇ ಬುದ್ದಿಮತ್ತೆಯನ್ನು ಲೆಕ್ಕಾಚಾರದ ಚತುರತೆಯನ್ನು ರೂಢಿಸಿಕೊಂಡಿದ್ದ ಶಕುಂತಲಾದೇವಿ ಗಣಿತದ  ಎಲ್ಲಾ ಕಠಿಣ ಸಮಸ್ಯೆಗಳನ್ನು ಬಗೆಹರಿಸುತ್ತಾ ಹೋದರು. ಎಲ್ಲವೂ ನೀರು ಕುಡಿದಂತೆ ಪರಿಹಾರವಾಗುತ್ತಿದ್ದುದನ್ನು ಕಂಡ ಜಗತ್ತು ಶಕುಂತಲಾ ದೇವಿಯ ಸ್ಮರಣೆ ಮತ್ತು ಚತುರತೆಗೆ ಮಾರು ಹೋಯಿತು. ಭಾರತೀಯ ಗಣಿತ ತಜ್ಞೆ  ಎಂದು ಹೆಸರಾದ ಅವರು 1977ರಲ್ಲಿ 201ರ ವರೆಗಿನ ಅಂಕಿಗಳ 23ನೇ ವರ್ಗಮೂಲವನ್ನು ಕೇವಲ 50ಸೆಕೆಂಡುಗಳಲ್ಲಿ ಲೆಕ್ಕ ಹಾಕಿ ಹೇಳಿ ಜಗತ್ತನ್ನೆ ಚಿಕಿತಗೊಳಿಸಿದರು. ಆ ಲೆಕ್ಕ ಹೀಗಿದೆ.
23ಡಿಜ ಡಿooಣ oಜಿ 916748676920039158098660927585380162483106680144308622407126516427934657040867096593279205767480806790022783016354924852380335745316935111903596577547340075681688305 620821016129132845564805780158806771=546372891
ಈ ಲೆಕ್ಕದ ಉತ್ತರವನ್ನು ಶಕುಂತಲಾದೇವಿ ಕೇವಲ 50ಸೆಕೆಂಡುಗಳಲ್ಲಿ ಲೆಕ್ಕ ಹಾಕಿ ಹೇಳಿದರೆ ಅಂದು ಬಳಕೆಯಲ್ಲಿದ್ದ UಓIಗಿಂಅ (Uಟಿiveಡಿsಚಿಟ ಂuಣomಚಿಣiಛಿ ಅomಠಿuಣeಡಿs oಡಿ ಛಿಚಿಟಛಿuಟಚಿಣoಡಿs) ಕಂಪ್ಯೂಟರ್ ಈ ಉತ್ತರ ನೀಡಲು ತೆಗೆದುಕೊಂಡ ಸಮಯ ಬರೋಬ್ಬರಿ 62ಸೆಕೆಂಡುಗಳು! ಅದೇ ರೀತಿ 1980ರಲ್ಲಿ ಲಂಡನ್ನಿನಲ್ಲಿ 13ಅಂಕಿಗಳಿದ್ದ ಸಂಖ್ಯೆಯ ಲೆಕ್ಕ(7,686,369,774,870 x 2,465,099,745,779=18,947,668,177,995,426,462,773,730 )ಗೆ ಉತ್ತರಿಸಲು ತೆಗೆದುಕೊಂಡ ಅವಧಿ ಕೇವಲ 28ಸೆಕೆಂಡುಗಳು. ಇದು 1995ರ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ ನಲ್ಲಿ ನಮೂದಾಗಿದೆ. ಹೀಗೆ ಸಾವಿರಾರು ದಾಖಲೆಗಳನ್ನು ಸಾವಿರಾರು ಪ್ರದರ್ಶನಗಳನ್ನು ನೀಡಿರುವ ಶಕುಂತಲಾ ದೇವಿ ಜಗದ್ವಿಖ್ಯಾತ ರಾಗಿದ್ದಾರೆ. ಮಾನವನ ಮೆದುಳಿನ ಶಕ್ತಿಗೆ ಒಂದುಸೀಮಿತ ವ್ಯಾಪ್ತಿಯಿದೆ, ಅದನ್ನು ಮೀರಿದರೆ ಸ್ಥಿಮಿತ ತಪ್ಪುವ ಸಾಧ್ಯತೆಗಳೆ ಹೆಚ್ಚು ಆದರೆ ಕಂಪ್ಯೂಟರ್ ಗಳು ನಿರೀಕ್ಷಿಸದ ವೇಗದಲ್ಲಿ ಮಾಹಿತಿಯನ್ನು ಪಡೆಯುವ ಮತ್ತು ನಿಖರವಾಗಿ ಉತ್ತರಿಸುವ ಅಭೂತ ಪೂರ್ವ ಶಕ್ತಿಯನ್ನು ಹೊಂದಿವೆ. ಅಂತಹ ಕಂಪ್ಯೂಟರ್ ಗಳಿಗೆ ಸವಾಲಾಗಿ ನಿಂತವರು ನಮ್ಮ ಶಕುಂತಲಾ ದೇವಿ.
ವಿದ್ಯಾರ್ಥಿ ಯುವ ಜನರಿಗೆ ಹಿಂದೆಲ್ಲಾ ಹಿರಿಯರು ಮಾನವ ಕಂಪ್ಯೂಟರ್ ಶಕುಂತಲಾದೇವಿಯನ್ನು ಉದಾಹರಿಸಿ ಅವರಂತಾಗಬೇಕು ನೆನಪಿನ ಶಕ್ತಿ ಇರಬೇಕು ಎಂದು ಉದಾಹರಿಸುತ್ತಿದ್ದರು. ಅಷ್ಟರಮಟ್ಟಿಗೆ ತನ್ನ ಛಾಪನ್ನು ಮೂಡಿಸಿದ್ದ ಶಕುಂತಲಾ ದೇವಿ ದೇಶ ವಿದೇಶಗಳನ್ನು ಸುತ್ತಿ ಎಲ್ಲೆಡೆಯೂ ಎಲ್ಲರಿಂದಲೂ ಸೈ ಎನಿಸಿಕೊಂಡು ಮಾನವ ನಿರ್ಮಿತ ಕಂಪ್ಯೂಟರ್ ಗೆ ಪರ್ಯಾಯ ವೆನಿಸಿಬಿಟ್ಟರು. ಈ ದಿಸೆಯಲ್ಲಿ ಶಕುಂತಲಾ ದೇವಿ ಸಾವಿರಾರು ಪುಸ್ತಕಗಳನ್ನು ಬರೆದಿದ್ದಾರೆ. ಆ ಮೂಲಕ ಜ್ಞಾನದ ಹರಿವನ್ನು ವಿಸ್ತರಿಸಿದ್ದಾರೆ, ಯುವ ಜನರಿಗೆ ಮಾದರಿಯಾಗಿದ್ದಾರೆ. ಇತ್ತೀಚೆಗೆ 2006ರಲ್ಲಿ ಇನ್ ಎ ವಂಡರ್ ಲ್ಯಾಂಡ್ ಆಫ್ ನಂಬರ್ಸ್ ವಿತ್ ಓರಿಯಂಟ್ ಪೇಪರ್ ಬ್ಯಾಕ್ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ್ದರು. ಸ್ಮರಣೆ ಶಕ್ತಿಯ ವೃದ್ದಿಗೆ ಪೂರಕವಾದ ವಿವಿಧ ಆಯಾಮಗಳ ಕುರಿತು ಸ್ಪಷ್ಟ ಪರಿಕಲ್ಪನೆ ಹೊಂದಿದ ಶಕುಂತಲಾ ದೇವಿ ಆ ಹಾದಿಯಲ್ಲಿ ಇನ್ನು ಸಾಧಿಸುವ ಹಾದಿಯಲಿದ್ದರು. 84ರ ಇಳಿ ವಯಸ್ಸಿನಲ್ಲಿ ಹೃದಯಾಘಾತದಿಂದ 21ಏಪ್ರಿಲ್ 2013ರಂದು ಕಾಲನ ವಶವಾದರು.
ಇಂತಹ ಆದಮ್ಯ ಪ್ರತಿಭೆಗಳು ನಮ್ಮ ನಡುವೆಯೇ ಇವೆ ಆದರೆ ಅವನ್ನು ಬೆಳಕಿಗೆ ತರುವ ಒಳಗಣ್ಣು ನಮ್ಮೊಳಗಿರಬೇಕು ಆ ಮೂಲಕ ಸಾರ್ವತ್ರಿಕವಾಗಿ ನಮ್ಮನ್ನು ನಾವು ತೆರೆದುಕೊಳ್ಳಲು ಸಾಧ್ಯ, ಸಾಮಥ್ರ್ಯ ಎಂಬುದು ಅವಕಾಶಗಳನ್ನು ಕಾಲ ಬುಡಕ್ಕೆ ತಂದು ಹಾಕುತ್ತದೆ ಎಂಬುದಕ್ಕೆ ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಸಾಕ್ಷಿ ಪ್ರಜ್ಞೆ ಆಗಿದ್ದಾರಲ್ಲವೇ?